ಹರೀಶ ಹಾಗಲವಾಡಿಯವರ “ಋಷ್ಯಶೃಂಗ”

ನಾನೇನೂ ಸಿಕಾಪಟ್ಟೆ ಪುಸ್ತಕ ಓದುವ ಹುಳುವಂತೂ ಅಲ್ಲ.ಹಾಗೆಯೇ ಪುಸ್ತಕ ವೆಂದರೆ ಅಲರ್ಜಿಯಂತೂ ಇಲ್ಲ! ಛಂದ ಪುಸ್ತಕ ಪ್ರಕಟಿಸಿದ ಹರೀಶ ಹಾಗಲವಾಡಿಯವರ “ಋಷ್ಯಶೃಂಗ” ಓದುವುದಕ್ಕೆ ಕುಳಿತಮೇಲೆ ಅಂವ ಬಿಡಲಿಲ್ಲ. ಸುಮ್ಮನೆ ಓದಿಸಿಕೊಂಡು ಹೋಗುತ್ತಾ ಇರ್ತಾನೆ!

ಹಾ…ನೀವೇನೂ ಓದಬೇಕಿಲ್ಲ….ಋಷ್ಯಶೃಂಗ ಹೇಳುತ್ತಾ ಹೋಗುತ್ತಾನೆ ನಾವು ಸುಮ್ಮನೆ ಕೇಳಿದರೆ ಸಾಕು! ಹರೀಶ ಹಾಗಲವಾಡಿಯವರದ್ದು ಎಷ್ಟು ಚೆಂದದ ಬರಹ ವೆಂದರೆ ಅವರ ಮೊದಲ ಕಾದಂಬರಿ “ನ್ಯಾಸ” ವನ್ನೂ ಓದಲೇ ಬೇಕೆಂಬ ಉತ್ಕಟತೆ ನಿಮ್ಮನ್ನು ಕಾಡುತ್ತದೆ.

ಸಾಮಾನ್ಯವಾಗಿ ಇನ್ಸ್ಟಾಲ್ಮೆಂಟ್ಗಳಲ್ಲೇ ಓದುವ ನಮ್ಮನ್ನು ಋಷ್ಯಶೃಂಗ ಒಂದೇ ಗುಕ್ಕಿನಲ್ಲಿ ಓದಿಸುತ್ತಾನೆ. ಸಮಾನಮನಸ್ಕ ಗೆಳೆಯರೇ ನೀವು ಓದಲೇಬೇಕೆಂಬ ಅಭಿಲಾಷೆ ನನ್ನದು.

ಅಪಾರ ಅವರ ಸುಂದರ ವಿನ್ಯಾಸದ ಪುಸ್ತಕ ನಿಮ್ಮ ಮನೆ ಹಾಗೂ ಮನಃ ದಲ್ಲಿದ್ದರೆ ನಂಗಂತೂ ಸಂತೋಷ. ಛಂದ ಪುಸ್ತಕ ದ ಮೂಲಕ ಚೆಂದದ ಪುಸ್ತಕ ಪ್ರಕಟಿಸುತ್ತಿರುವ ವಸುಧೇಂದ್ರರೂ ಅಭಿನಂಧನಾರ್ಹರು.

ನಿಮ್ಮ ಪ್ರತಿಗಾಗಿ 9945939436 ಗೆ ವಾಟ್ಸಾಪ್ ಮಾಡಿ.

ಎಂ. ಟಿ. ವಿ ಆಚಾರ್ಯ – Caricature

ಚಂದಮಾಮ ಆಚಾರ್ಯರಿಗೆ ನೂರುವರ್ಷ

ಇಂದೀಗ ಮಧ್ಯವಯಸ್ಸಿಗೆ ಕಾಲಿಟ್ಟವರೆಲ್ಲ ಬಾಲ್ಯದಲ್ಲಿ ಚಂದಾಮಾಮ ಓದಿಯೇ ಬೆಳೆದವರು…ಅದರೊಳಗಿನ ಚಿತ್ರಕತೆ, ಕತೆ ಕಟ್ಟಿದ ಅಪೂರ್ವ ಚಿತ್ರಗಳಿಂದ ಬೆರಗಿನ ಲೋಕ ವಿಸ್ತರಿಸಿಕೊಂಡವರು. ಚಂದಮಾಮ ಎಂದರೆ ನಮ್ಮ ಕಾಲದ ಮಕ್ಕಳ ಮನೋಸಾಮ್ರಾಜ್ಯಕ್ಕೆ ಕಥನಕಲೆಯನ್ನು ಕೊಟ್ಟದ್ದಷ್ಟೇ ಅಲ್ಲ, ಭಾವ ಸಾಮ್ರಾಜ್ಯವನ್ನು ವಿಸ್ತರಿಸಲು ಕಲಿಸಿದ್ದು..,ಓದಿನ ರುಚಿ ಹತ್ತಿಸಿದ್ದೆಲ್ಲ ಹೌದು..

ಈ ಚಂದಮಾಮನ ಅಮೂಲ್ಯ ನೆನಪನ್ನು ನಮ್ಮ ಚಿತ್ತಭಿತ್ತಿಯ ಭಾವಕೋಶದಲ್ಲಿ ಬೆಚ್ಚಗೆ ಕೂರಿಸಿದ ಅನನ್ಯ ವರ್ಣಚಿತ್ರಗಳ .,ಅಪಾರಪ್ರತಿಭೆಯ ಅಪ್ಪಟ ಕಲಾವಿದ
ಎಂ. ಟಿ. ವಿ ಆಚಾರ್ಯರಿಗೆ ಇಂದು (ಜೂ.28) ಜನ್ಮಶತಮಾನೋತ್ಸವ.
ನಮ್ಮನಾಡಿನಲ್ಲಿ ಆಚರಣೆಯಾಗಬೇಕಿದ್ದ ಸಂಭ್ರಮ..!

ಈ ಕೋವಿಡ್ ಕಾಲದಲ್ಲಿ ಪ್ರಚಾರಗಳಿಲ್ಲದೇ ಮಹಾನ್ ಕಲಾವಿದರೊಬ್ಬರ ಜನ್ಮಶತಾಬ್ದಿ ಸದ್ದಿಲ್ಲದೇ ಜಾರಿಹೋಗುತ್ತಿರುವುದು ,ನೆನಪು ನೇಪಥ್ಯಕ್ಕೆ ಸಾಗುವುದು ವಿಷಾದನೀಯ.
ಚಂದಮಾಮ ಕನ್ನಡ ಕಾಮಿಕ್ಸ್ ಲೋಕದ ಅಮೂಲ್ಯ, ಅನನ್ಯ ಹೊತ್ತಗೆ. ಪೌರಾಣಿಕ ಕಥನಗಳಿಗೆ ಚಿತ್ರಭಾಷೆಯ ಹೊಸ ವಾಂಙ್ಮಯ ಬರೆದ ಸಾಧನೆ ಅದರದ್ದು. ಈ ಸಾಧನೆಯ ಕೀರ್ತಿಕಿರೀಟ ಸಲ್ಲಬೇಕಾಗಿರುವುದು ಎಂ.ಟಿ.ವಿ.ಆಚಾರ್ಯರಿಗೆ.
ಆಚಾರ್ರು ಜುಲೈ 28, 1920ರಲ್ಲಿಮೈಸೂರಿನಲ್ಲಿ ಜನಿಸಿದವರು.
ಪ್ರಾ.ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಹಿಂದೂಸ್ಥಾನ್ ವಿಮಾನ ಕಾರ್ಖಾನೆ(ಎಚ್.ಎ.ಎಲ್)ನಲ್ಲಿ ಟ್ರೇಸರ್ ಆಗಿದ್ದರು. ಕಲೆ ಜನ್ಮಜಾತ ಸಿದ್ದಿ.
1942ರಲ್ಲಿ ಸುಮಾರು 80ರಷ್ಟು ಕಲಾಕೃತಿಗಳನ್ನವರು ರಚಿಸಿದ್ದರು. ಪ್ರದರ್ಶನಗೊಂಡ ಈಚಿತ್ರಗಳು ಆಚಾರ್ರನ್ನು ಪ್ರಸಿದ್ದಿಯತ್ತ ಕೈ ಹಿಡಿದು ನಡೆಸಿತು. ದಿಢೀರನೆ ಖ್ಯಾತರಾದರು.
1946ರಲ್ಲಿ ಕಲ್ಕತ್ತಾದ ಅಕಾಡೆಮಿ ಆಫ್ ಫೈನ್ಆರ್ಟ್ ಸಂಸ್ಥೆಯ ಕಲಾಪ್ರದರ್ಶನದಲ್ಲಿ ಆಚಾರ್ರ 6ಚಿತ್ರಗಳು ಪ್ರದರ್ಶನವಾದುವು. ಇಲ್ಲಿ ಚಿತ್ರ ಪ್ರದರ್ಶನವಾಗುವುದೆಂದರೆ ಕಲಾವಿದನ ಪಾಲಿಗೆ ಅದೊಂದು ರಾಷ್ಟ್ರೀಯ ಅಂಗೀಕಾರ.
ಇದವರ ಕಲಾಬದುಕಿನ ಮಗ್ಗುಲನ್ನೇ ಬದಲಾಯಿಸಿತು.

ಆಗಲೇ ದ.ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ಚಂದಮಾಮ ಪತ್ರಿಕೆ ಇವರನ್ನು ಆಹ್ವಾನಿಸಿತು. ಮುಖಪುಟ ತಯಾರಿಯ ಜವಾಬ್ದಾರಿ ನೀಡಿತು. ಮುಖಪುಟ ರಚಿಸಲೆಂದು ಬಂದ ಕಲಾವಿದ ಎಂಟಿವಿ ಆಚಾರ್ ಬಳಿಕ ಚಂದಮಾಮ ಕನ್ನಡ ಆವೃತ್ತಿಯ ಸಂಪಾದಕರಾದರು. ಭಾರತೀಯ ಕಾಮಿಕ್ಸ್ ಚಿತ್ರದ ಮ್ಯಾಗಜೀನ್ ಇತಿಹಾಸದಲ್ಲಿ ನವಚರಿತ್ರೆ ನಿರ್ಮಿಸಿ ಇತಿಹಾಸವಾದರು.ಈ ಮೂಲಕ ಚಂದಮಾಮದ ಆಚಾರ್ರೆಂದೇ ಕನ್ನಡ ಜನಮಾನಸದಲ್ಲಿ ಮುದ್ರೆಯೊತ್ತಲ್ಪಟ್ಟರು.

ತನ್ನ ಚಿತ್ರ ಕೌಶಲ್ಯದಿಂದ ತಾಯ್ನಾಡು ಗ್ರೂಪಿನ ಪ್ರಧಾನ ಕಲಾವಿದರಾದ ಅವರು ಚಂದಮಾಮ ದಲ್ಲಿ ಸಮಗ್ರ ಮಹಾಭಾರತಕ್ಕೆ ಚಿತ್ರಸರಣಿ ಬರೆದಿದ್ದಾರೆ. ಇಂದಿಗೂ ದೇಶದಲ್ಲಿ ಇದೊಂದು ಅಪೂರ್ವ ಕಲಾಕಾಣಿಕೆ. ಆಚಾರ್ರು ತನ್ನ ಚಿತ್ರಗಳೊಂದಿಗೆ ದೇಶ, ವಿದೇಶ ಸಂಚರಿಸಿದ್ದಾರೆ. ಪ್ರದರ್ಶನ, ಕಮ್ಮಟ,ತರಬೇತಿ ಶಿಕ್ಷಣ ನೀಡಿದ್ದಾರೆ. ಆ ಮೂಲಕ ಕನ್ನಡದ ಹಿರಿಮೆಯಾಗಿದ್ದಾರೆ. ಆಚಾರ್ಯ ಕಲಾಭವನ ಸ್ಥಾಪನೆಗೆ ಮತ್ತು ಎಸಿಬಿ ಅಂಚೆ ಶಿಕ್ಷಣ ಆರಂಭಿಸಲು ಮೈಸೂರಿನ ತಮ್ಮ ಮನೆಯನ್ನೇ ಮಾರಿದ್ದಾರೆ…!! ಸಾವಿರಾರು ಮಂದಿಗೆ ಕಲಾಶಿಕ್ಷಣ ನೀಡಿ ಕಲೆಯನ್ನು ಕೈ ದಾಟಿಸಿದ್ದಾರೆ..

ಕೇವಲ ಭಾರತದಲ್ಲಷ್ಟೆ ಅಲ್ಲ ವಿದೇಶದಲ್ಲೂ ಆಚಾರ್ರ ಚಿತ್ರ ಪ್ರತಿಭೆಗೆ ಅಭಿಮಾನಿಗಳಿದ್ದಾರೆ. ಗೌರವಗಳು ಸಂದಿವೆ. ಕನ್ನಡ ನಾಡಿನ ಅಧಿಕೃತ ಪ್ರತಿನಿಧಿಯಾಗಿ ಸೋವಿಯತ್ ಯೂನಿಯನ್ ನಲ್ಲಿ ಕಲಾಪ್ರವಾಸ ನಡೆಸಿದ್ದಾರೆ. ಭಾರತದ ಸಾಂಸ್ಕೃತಿಕ ಚಿತ್ರವೈಭವಗಳ ಪ್ರದರ್ಶನ ನೀಡಿದ್ದಾರೆ. ಪುರಸ್ಕಾರ ಪಡೆದಿದ್ದಾರೆ. ಜಗತ್ತಿನಾದ್ಯಂತ ಆಚಾರ್ರ ಚಿತ್ರಗಳಿಗೆ ಬೇಡಿಕೆಯಿತ್ತು. ಇಂದಿಗೂ ಅನೇಕ ಮ್ಯೂಸಿಯಂಗಳಲ್ಲಿ ಭಾರತೀಯ ಪೌರಣಿಕ ಕಥನಕ್ಕೆ ಆಚಾರ್ರ ಚಿತ್ರಗಳೇ ಧ್ವನಿ..

ಚಂದಮಾಮ ಮಕ್ಕಳ ಪತ್ರಿಕೆ.
ಅದರೊಳಗಿನ ಚಿತ್ರಗಳೋ ಮಕ್ಕಳನ್ನೂ ಮೀರಿದ ಪ್ರೌಢತೆಯದ್ದು. ಚಿತ್ರಗಳ ಮೂಲಕವೇ ಮೌಲ್ಯದ ತಕ್ಕಡಿಯಲ್ಲಿ ನಾಡಜನತೆಯ ಗೌರವಕ್ಕೆ ಪಾತ್ರವಾದ ಚಂದಮಾಮದ ಯಶಸ್ಸಿನಲ್ಲಿ ಆಚಾರ್ಯ ರ ಪ್ರತಿಭೆ ಕರಗಿದೆ,ಪ್ರಕಾಶಿಸಿದೆ.ಈಗ ಇದ್ದಿರುತ್ತಿದ್ದರೆ ಅವರಿಗೆ ನೂರು ವರುಷ…
ಆದರೆ ಅಪಾರ ಸಂಖ್ಯೆಯ ಶಿಷ್ಯರು ಆ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ನಾವು ಸಾಗಿಬಂದ ಬಾಲ್ಯಕ್ಕೆ ಬೆರಗನ್ನು ತಂದ, ಅಚ್ಚರಿಗಳ ಚಿತ್ರಗಳಿಂದ ಪೌರಾಣಿಕದ ಅಪೌರುಷೇಯ ಜಗತ್ತನ್ನು ಚಿತ್ರಿಸಿದ ಆಚಾರ್ರಂತಹ ಮಹಾನ್ ಪ್ರತಿಭೆಗಳನ್ನು ಮರೆಯಲು ಸಾಧ್ಯವೇ….
ಇಲ್ಲ..
ಅವರ ನೆನಪುಗಳಿಗೆ ನಮನ.
ಮತ್ತೊಮ್ಮೆ ಬನ್ನಿ ಆಚಾರ್ರೇ…

ಬರಹ: ಎಂ. ನಾ. ಚಂಬಲ್ತಿಮಾರ್

ಸಿಸಿಬಿ ಪೊಲೀಸರಿಂದ ತುಪ್ಪದ ಬೆಡಗಿ ಬಂಧನ!

ಸ್ಯಾಂಡಲ್​​ವುಡ್ ಡ್ರಗ್ಸ್ ಜಾಲದ ಜತೆಗಿನ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ಕುರಿತು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು ಈಗ ಬಂಧಿಸಿದ್ದಾರೆ.

NEWS