Master Hirannaiah – Caricature

Hirannaiah or Hirannayya known by his stage name Master Hirannaiah a theatre artist in Karnataka, India.

21_20_Hirannaiah

ಇದರೊಂದಿಗೆ ಮೇ ೫ -೨೦೧೯ ರಂದು ಹಿರಣ್ಣಯ್ಯ ನವರ ನಿಧನ ದ ಸಮಯದಲ್ಲಿ ಬರೆದ ಚಿಕ್ಕ ಬರಹವೊಂದನ್ನು ಹಂಚಿಕೊಳ್ಳುತ್ತಿರುವೆ.

ಮೊನ್ನೆ ಸುದ್ದಿ ಕೇಳಿದಾಗಿನಿಂದ ಮನಸ್ಸು ಖಾಲಿ ಖಾಲಿ. ನಮ್ಮಣ್ಣ(ಅಪ್ಪನನ್ನು ಅಣ್ಣ ಎಂದೇ ಕರೆಯುತ್ತಿದ್ದುದು) ಹಿರಣ್ಣಯ್ಯ ನವರ ದೊಡ್ಡ ಅಭಿಮಾನಿಯಾಗಿದ್ದರು, ಅವರು ಹಿರಣ್ಣಯ್ಯ ನ ನಾಟಕಗಳ ಬಗ್ಗೆ ಹೇಳುತ್ತಿದ್ದ ಸ್ವಾರಸ್ಯಕರ ಸಂಗತಿಗಳು ನಾವು ಕಣ್ಣು ಬಾಯಿ ಬಿಟ್ಟು ಕೇಳುವಂತೆ ಮಾಡುತ್ತಿತ್ತು. ಅಪರೂಪಕ್ಕೆ ಬೆಂಗಳೂರಿಗೆ ಹೋದಾಗಲೆಲ್ಲಾ ಅಣ್ಣ, ಹಿರಣ್ಣಯ್ಯ ನವರ ಮನೆಗೆ ಭೇಟಿ ಕೊಟ್ಟು ಬಂದೇಬರುತ್ತಿದ್ದರು. ಮನೆಗೆ ಬಂದು ವಿಷಯಗಳನ್ನ ಸ್ವಾರಸ್ಯ ವಾಗಿ ವಿವರಿಸುವಾಗ ನಮಗೆ ಸ್ವರ್ಗಕ್ಕೆ ಮೂರೇ ಗೇಣು!

ಚಿಕ್ಕಂದಿನಿಂದಲೇ ನನಗೆ ಎಲ್ಲರಿಗೂ ಪತ್ರ ಬರೆಯುವ ಹುಚ್ಚಿತ್ತು, ತೀರಾ ಇತ್ತೀಚಿನ ವರೆಗೂ ಎಲ್ಲವನ್ನೂ ಜೋಪಾನವಾಗಿಟ್ಟಿದ್ದೆ, ಮನೆ ಬದಲಾಯಿಸುವ ಸಮಯದಲ್ಲಿ ಅನೇಕ ಪತ್ರಗಳು ಕಾಣೆಯಾಗಿವೆ. ಹಾಗೇಯೇ ನಾನು ಹಿರಣ್ಣಯ್ಯ ನವರಿಗೂ ಪತ್ರ, ಕೈಯಿಂದನೇ ಮಾಡಿದ ಗ್ರೀಟಿಂಗ್ಸ್ , ಕಳುಹಿಸುತ್ತಿದ್ದೆ, ಅನೇಕರಿಂದ ಮಾರುತ್ತರ ಬರದಿದ್ರೂ ಹಿರಣ್ಣಯ್ಯ ನವರಿಂದ ಮಾತ್ರಾ ಬಂದೇ ಬರುತ್ತಿತ್ತು!

ನಾನು ಹವ್ಯಾಸಕ್ಕಾಗಿ ಬರೆಯುವ ವ್ಯಂಗ್ಯಚಿತ್ರ ಗಳಿಗೆ ಮೊದಲು ದತ್ತು ಕಟ್ಟೆಹಕ್ಕಲು ಅಂತ ಸಿಗ್ನೇಚರ್ ಮಾಡ್ತಾಇದ್ದೆ, ಹಿರಣ್ಣಯನವರ ಒಂದು ಪತ್ರದಲ್ಲಿ ನನ್ನ ಹೆಸರನ್ನು ಅವರು ದತ್ತಾ-3 ಉಲ್ಲೇಖ ಮಾಡಿದ್ದನ್ನು ನೋಡಿದಮೇಲೆ ಅರೆ ಹೌದಲ್ಲಾ..‌ಹೀಗೇ ಇದ್ರೆ ಚೆನ್ನಾಗಿರುತ್ತಲ್ಲ ಅನ್ನಿಸಿ ಆಮೇಲೆ ಚಿತ್ರಗಳಲ್ಲಿ ದತ್ತಾ3 ಅಂತ ಬರೆಯಲು ಪ್ರಾರಂಬಿಸಿದೆ!

2009 ರಲ್ಲಿ ಅಪ್ಪ ಅಮ್ಮನೂ ಬದುಕಿ ಬಾಳಿದ ನನ್ನೂರನ್ನೂ ಬಿಟ್ಟು ನನ್ನ ಜೊತೆ ಬೆಂಗಳೂರಿಗೇ ವಲಸೆ ಬಂದಾಯ್ತು. ಹಳ್ಳಿ ಜೀವನದಲ್ಲಿ ಆರಾಮಾಗಿ ಕಳೆದಿದ್ದ ಅಪ್ಪ ಇಲ್ಲಿನ ಜೀವನಕ್ಕೆ ಹೊಂದಿಕೊಂಡದ್ದೇ ಒಂದು ಪವಾಡ! ಇದರ ಮದ್ಯೆ ಅನೇಕ ಬಾರಿ “ಒಂದ್ಸಾರಿ ಹಿರಣ್ಣಯನವರ ಮನೆಗೆ ಕರೆದುಕೊಂಡು ಹೋಗ್ ಮಾರಾಯ” ಅಂತ ಹೇಳಿದರೂ ನನಗೆ ಸಾದ್ಯವಾಗಿರಲಿಲ್ಲ. ಇದರ ಮದ್ಯೆ ಅಣ್ಞನಿಗೆ ಆರೋಗ್ಯ ಸಮಸ್ಯೆ ಉಲ್ಬಣವಾಗಿತ್ತು. ಒಂದಿನ ಅಣ್ಣ ಇಲ್ಲೇ ಹೊರಗೇ ಹೋಗಿ ಬರ್ತೀನಿ ಅಂತ ಹೇಳಿ ಹೋದೋರು ಎಷ್ಟು ಹೊತ್ತಾದ್ರೂ ಬಂದಿಲ್ಲ! ಅಮ್ಮನಿಗೆ ಕಳವಳ, ಅವರು ” ಫೋನ್ ಕೂಡಾ ತಗೊಂಡ್ ಹೋಗಿಲ್ಲ, ಎಲ್ಲ್ ಹೋಗ್ತೀನಿ ಅಂತಾನೂ ಹೇಳಿಲ್ಲ” ಅಂತ ಗೊಣಗತೊಡಗಿದಳು. ನಂಗೂ ಗಾಬರಿ ಯಾಗಿ ಅವರು ಹೋಗುತ್ತಿದ್ದ ದೇವಸ್ಥಾನ, ಅಂಗ್ಡಿ, ಎಲ್ಲಾ ಕಡೆಗೆ ಹೋಗಿ ವಿಚಾರಿಸಿದರೂ ಸುಳಿವಿಲ್ಲ! ಇನ್ನೇನು ಪೋಲಿಸ್ ಕಂಪ್ಲೇಂಟೇ ಕೊಡೋದೇನೂ ಅಂತ ಯೋಚಿಸುತ್ತಿರುವಾಗ, ಅಣ್ಣನ ಸವಾರಿ ಆಟೋದಿಂದ ಇಳಿಯಿತು! ನಮಗೆಲ್ಲ ಸಿಟ್ಟು, ದುಗುಡ. ಆದರೆ ಅಣ್ಣ ನಗುನಗುತ್ತಾ ಬಂದರು, “ಅಣಾ ಎಲ್ಲೋಗಿದ್ರಿ? ನಮ್ಗೆಲ್ಲಾ ಎಷ್ಟ್ ಗಾಬ್ರಿ ಆಗಿತ್ತು ಗೊತ್ತಾ?” ಅನ್ನುವಷ್ಟರ ಹೊತ್ತಲ್ಲಿ ಅಣ್ಣ ತಣ್ಣಗೆ, “ಹಿರಣ್ಣಯ್ಯ ನವರ ಮನೆಗೆ ಹೋಗಿದ್ದೆ” ಆಟೋದವನಿಗೆ ಅಡ್ರೆಸ್ ತೋರಿಸಿ ಅವನ ಸಹಾಯದಿಂದ “ರಂಗಭೂಮಿ” ಗೆ ಹೋಗಿ ಬಂದಿದ್ರು! ಗೆಲುವಿನಿಂದ ಅಲ್ಲಿನ ವಿಷಯಗಳನ್ನ ಹೇಳುವಾಗ ಅಣ್ಣನ ಕಣ್ಣಲ್ಲಿನ ಹೊಳಪು, ಆರೋಗ್ಯ ಸಮಸ್ಯೆ ಇಲ್ಲವೇನೋ ಎಂಬತ್ತಿತ್ತು.
ಮೂರುವರ್ಷಗಳ ಹಿಂದೆ ಅಣ್ಣ ತೀರಿಕೊಂಡ್ರು, ಅವತ್ತು ಮನಸ್ಸು ಖಾಲಿಯಾಗಿತ್ತು, ಮೊನ್ನೆ ಮತ್ತೆ ಖಾಲಿ ಖಾಲಿ ಅನ್ನಿಸತೊಡಗಿತು.
ಹಿರಣ್ಣಯ್ಯ ನಮ್ಮನ್ನು ಬಿಟ್ಟು ಹೋದರು, ಅವರು ಪತ್ರದಲ್ಲಿ ಬರೆದ ಹಾಗೆ ನನ್ನ ಹೆಸರು (ದತ್ತಾ3) ನನ್ನ ಚಿತ್ರಗಳಲ್ಲಿ ಯಾವಗಲೂ ಇರತ್ತೆ!

 

1

Dr. Rajkumar – Caricature

28_20_Dr Raj

Singanalluru Puttaswamy Muthuraj known mononymously by his stage name Rajkumar, was an Indian film actor and playback singer in the Kannada cinema.

Rajkumar was best regarded by Kannada audiences and the Kannada film industry for being a highly disciplined man in both his personal and professional lives. He practised Carnatic music for an hour each day in the morning and in the evening. His punctuality is another noted aspect. Waking up every morning at 4 am, he performed Yoga and Pranayama, which is said to be the reason behind his physical and mental fitness. His Yoga performances can be seen in the first clips of his film Kaamana Billu.

Prabhakar Raobail – Caricature

Raobailsir-datta3

Prabhakar Raobail, or Raobail was an Indian artist and cartoonist.
Raobail was born in 1937 in Kasargod. He studied science in Bangalore and later, studied for a diploma in Applied Arts from the JJ Institute of Applied Art in Mumbai. He joined the Art Department of the Life Insurance Corporation of India as an illustrator and designer, working there for over 31 years. He retired from here and settled down in Dharwad in 1989.
aobail has contributed cartoons and illustrations to a host of newspapers and magazines. He adopted his professional name ‘Raobail’, because he thought his original surname ‘Rao’ was far too common. Under this name, he published in publications such as the Indian Express, the Times of India, Reader’s Digest, The Illustrated Weekly of India, Eve’s Weekly, Imprint, Debonair, Blitz , Sun, Inside Outside, and the Taj Magazine, besides regional publications. His cartoons have featured in the Penguin Book of Indian Cartoons edited by Abu Abraham.

Raobail has designed and illustrated children’s books for UNICEF, such titles as Chakramadhye, Saban, and Railgaadi. He has done greeting cards for CRY and Concern India. He also creates collage art using stamps and envelopes.

He has held one-man exhibitions in India and abroad. A selection of his work over 25 years was shown in 2008. In 2009, he was selected by Indian Institute of Cartoonists for their Lifetime Achievement Award.